ಬುಲೆಟ್ ಪ್ರಕಾಶ್ (ಜನನ: 2 ಏಪ್ರಿಲ್ 1976, ಸಾವು: 6 ಏಪ್ರಿಲ್ 2020) ಒಬ್ಬ ಕನ್ನಡ ನಟ. ಹಾಸ್ಯ ಪಾತ್ರಗಳನ್ನು ಚಿತ್ರಿಸಲು ಹೆಸರುವಾಸಿಯಾದ ಪ್ರಕಾಶ್ 325 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕನ್ನು ಬಳಸುತ್ತಿದ್ದರಿಂದ, ಅವರು "ಬುಲೆಟ್" ಎಂಬ ಅಡ್ಡಹೆಸರನ್ನು ಗಳಿಸಿದರು. 2015 ರಲ್ಲಿ ಪ್ರಕಾಶ್ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದರು. == ಸಾಧನೆ == ಪ್ರಕಾಶ್‌ರವರು ಕನ್ನಡದ ಸುವರ್ಣ ಚಾನಲ್‌ನಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋನಲ್ಲಿ ಬಿಗ್‌ಬಾಸ್ ಎರಡನೇ ಋತುವಿನಲ್ಲಿ ಪಾಲ್ಗೊಂಡಿದ್ದರು. ಸೋಮ್ಬೆ ಎಂಬ ತುಳು ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ೩೦೦ಕ್ಕೂ ಹೆಚ್ಚು ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ. == ಚಲನಚಿತ್ರಗಳ ಪಟ್ಟಿ == == ನಿಧನ == ಯಕೃತ್ತಿನ ಸೋಂಕಿನಿಂದಾಗಿ ೬ ಏಪ್ರಿಲ್ ೨೦೨೦ ರಂದು 44 ನೇ ವಯಸ್ಸಿನಲ್ಲಿ ವಿಧಿವಶರಾದರು. == ಉಲ್ಲೇಖಗಳು ==